ಬೇರೆಯೇ ಇವೆ ಬಂಡಾಯದ ಕಾರಣಗಳು!

೧೮೫೭ರ ಬಂಡಾಯ
ಪ್ರ: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)
ಕೋಲಾರ ಜಿಲ್ಲಾ ಸಮಿತಿ, ಕೋಲಾರ
ಬೆಲೆ: ೨೦ ರೂ. ಪುಟಗಳು: ೬೪

1857.jpg

ಬ್ರಿಟಿಷರ ಅಡಿಯಲ್ಲಿದ್ದ ಭಾರತದ ಸಿಪಾಯಿಗಳು ನಡೆಸಿದ ೧೮೫೭ರ ಬಂಡಾಯಕ್ಕೆ ಬಂದೂಕಿನ ಕಾಡತೂಸಿಗೆ ಬಳಸಿದ ಹಂದಿ ಮತ್ತು ದನದ ಕೊಬ್ಬನ್ನು ಕಚ್ಚಿ ತೆಗೆಯಬೇಕಾದ ಪರಿಸ್ಥಿತಿ ಕಾರಣವೆಂಬಂತೆ ಹಲವೆಡೆ ಬಿಂಬಿಸಲಾಗಿತ್ತು. ಆದರೆ ಈ ಪುಸ್ತಕದಲ್ಲಿನ ವಿವಿಧ ತಜ್ಞರ ಲೇಖನಗಳಿಂದ ತಿಳಿದುಬರುವ ಪ್ರಮುಖ ಅಂಶವೇನೆಂದರೆ, ಅಂದಿನ ಸಾಮಾಜಿಕ ಪರಿಸ್ಥಿತಿ, ಬ್ರಿಟಿಷರು ೧೮೩೯ರಿಂದ ೧೮೫೭ರವರೆಗೆ ವಿವಿಧ ದೇಶಗಳಲ್ಲಿ ನಡೆಸಿದ ೧೦ ಯುದ್ಧಗಳಲ್ಲಿ ಭಾರತೀಯ ಸೈನಿಕರ ಬಳಕೆ ಮತ್ತು ವಿಪರೀತ ಸಾವು, ನೋವುಗಳು, ಕೆಲವು ದಲ್ಲಾಳಿ ಜಮೀನ್ದಾರರಿಗೆ ರಿಯಾಯ್ತಿ ನೀಡಿ, ಸಾಮಾನ್ಯ ರೈತರಿಗೆ ವಿಧಿಸಿದ ವಿಪರೀತ ತೆರಿಗೆ ಮತ್ತು ಗೇಣಿ, ದೇಶೀಯ ರಾಜರುಗಳನ್ನು ಕುತಂತ್ರದಿಂದ ಸೋಲಿಸಿ ಸಂಸ್ಥಾನಗಳನ್ನು ಕಬಳಿಸುವುದು ಇಂತಹ ಹತ್ತಾರು ಕಾರಣಗಳು ಬಂಡಾಯಕ್ಕೆ ನಾಂದಿ ಹಾಡಿವೆ. ಅಂದು ಆಧುನಿಕ ರಾಷ್ಟ್ರ್‍ಈಯತೆಯ ಕಲ್ಪನೆ ಇರದಿದ್ದರೂ, ಬ್ರಿಟಿಷರ ವಿರುದ್ಧ ನಾವೆಲ್ಲಾ ಒಂದಾಗಬೇಕೆಂದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಸಿಖ್ ಮತ್ತಿತರ ಧರ್ಮಗಳ ಜನರ ಐಕ್ಯತೆಯನ್ನು ಸಾರಿದ ಸಮರವದು.

(ಪ್ರಸ್ತಾವನೆಯಿಂದ)

Advertisements
Explore posts in the same categories: ಫ್ರೆಷ್ ಪೇಜಸ್

2 ಟಿಪ್ಪಣಿಗಳು on “ಬೇರೆಯೇ ಇವೆ ಬಂಡಾಯದ ಕಾರಣಗಳು!”

 1. ಚಕ್ರವರ್ತಿ, ಸೂಲಿಬೆಲೆ Says:

  ಲೇಖಕರು ಹೊಸತೇನನ್ನೋ ಹುಡುಕಿ ತೆಗೆದಂತೆ, ಪ್ರಸ್ತಾವನೆಯಲ್ಲಿ ಬರೆದಿರುವುದು ಅಚ್ಚರಿಯೆನಿಸುತ್ತದೆ. 100 ವರ್ಷಗಳ ಹಿಂದೆಯೇ ಸಾವರ್ಕರ್ ಅದನ್ನು ಬರೆದು ಅದಕ್ಕೆ ಸಾಕಷ್ಟು ಪುರಾವೆಗಲನ್ನು ನೀಡಿದ್ದಾರೆ. ಇದು ಬಂಡಾಯವೋ, ದಂಗೆಯೋ ಅಲ್ಲ; ಸ್ವಾತಂತ್ರ್ಯ ಸಂಗ್ರಾಮ ಎಂಬುದನ್ನೂ ಮುಲಾಜಿಲ್ಲದೇ ಮಂಡಿಸಿದ್ದಾರೆ. ಅದು ಇತ್ತೀಚಿನ ಲೇಖಕರ ಸಂಶೋಧನೆಯೇನೂ ಅಲ್ಲ!
  ಜೊತೆಗೆ ರಾಷ್ಟ್ರೀಯತೆಗೆ ಈಚಿನ ರಾಷ್ಟ್ರೀಯತೆ, ಹಿಂದಿನ ರಾಷ್ಟ್ರೀಯತೆ ಎಂಬ ವ್ಯಾಖ್ಯಾನವಿರುವುದನ್ನು ನಾನಂತೂ ಕೇಳಿಲ್ಲ. ಕಮ್ಯನಿಸ್ಟ್ ಲೇಖಕರಿಗೆ ಈ ರೀತಿ ಇತಿಹಾಸದೊಳಗೆ ಇಲ್ಲದ್ದನ್ನು ಹುಡುಕುವುದು ರೂಢಿ. ಇದು ಅಂತಹುದೇ ಒಂದು ಪ್ರಯತ್ನ ಅಷ್ಟೇ.

 2. chetana thirthahalli Says:

  Haudu. idu modala prayatnavenu alla ennuvudakke sahamatavide.
  AdarU kannadadalli olleya prayatna.
  ee modalu 1857ra horatada bagge kannadadalli kulankasha vishleshaneya 2 pustakagalu bandive. idu muraneyadeno…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: