“ಅಪಾರ” ಲೀಲೆ
ಕಾರ್ಡ್ ಒಂದನ್ನು ಅದು ಹುಟ್ಟಿದ ಸಂದರ್ಭದ ಆಚೆಗೂ ಹೇಗೆ ಪ್ರಸ್ತುತವಾಗಿರುವಂತೆ ಮತ್ತು ಮನೆಯಲ್ಲಿ ಜೋಪಾನವಾಗಿ ಕಾಯ್ದುಕೊಳ್ಳುವಂತೆ ರೂಪಿಸಬಹುದು ಎಂಬುದಕ್ಕೆ ಉದಾಹರಣೆಯೊಂದು ಇಲ್ಲಿದೆ. ಈಗಾಗಲೇ ಹಲವಾರು ಹಿರಿ ಕಿರಿಯ ಲೇಖಕರ ಕೃತಿಗಳ ಮುಖಪುಟ ವಿನ್ಯಾಸಗೊಳಿಸಿ ಗಮನ ಸೆಳೆದಿರುವ ಅಪಾರ ಈ ಕಾರ್ಡನ್ನು ವಿನ್ಯಾಸಗೊಳಿಸಿದ್ದಾರೆ. ಮುಖಹೀನ ಗುಣದ ಇನ್ವಿಟೇಷನ್ ಕಾರ್ಡುಗಳ ಮಧ್ಯೆ, ಕಾರ್ಡುಗಳ ಬಗೆಗಿನ ಪರಿಕಲ್ಪನೆಯನ್ನೇ ಬದಲಿಸಬಲ್ಲಷ್ಟು ವಿಭಿನ್ನತೆ ಇದರದ್ದು.
